ಚೇರಮನ್ ಮೆಸೇಜ್

ಜಿಲ್ಲೆಯ ಹೆಮ್ಮೆಯ ಉದಯೋನ್ಮುಖ ಸಹಕಾರಿ ಸಂಸ್ಥೆಯಾಗಿ ಸೇಫ್ ಸ್ಟಾರ್ ಸೌಹಾರ್ದ ಸಹಕಾರಿ ಸಂಘ ನಿಯಮಿತ, ಪ್ರಧಾನ ಕಛೆರಿ, ಹೊನ್ನಾವರ ದಿನಾಂಕ 12/12/2011ರಲ್ಲಿ ಆರಂಭಗೊಂಡು ಉತ್ತಮ ಜನಪರ ಸಂಸ್ಥೆಯೆಂದು ಪ್ರಖ್ಯಾತಿ ಹೊಂದಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಹತ್ತು ಶಾಖೆಗಳನ್ನು ತೆರೆದು ಸಹಕಾರಿ ಕ್ಷೇತ್ರದಲ್ಲಿ ಅಮೋಘ ಸಾಧನೆ ಗೈದಿದೆ.

ಸಹಕಾರಿಯು ತನ್ನ ಕಾರ್ಯಶೀಲತೆ ಹಾಗೂ ಪಾರದರ್ಶಕ ಆಡಳಿತದಿಂದ ಸಂಬಂಧಪಟ್ಟ ಇಲಾಖೆಯಿಂದ ಪ್ರಶಂಸೆ ಪಡೆದಿದೆ. ಸಹಕಾರಿಯಲ್ಲಿನ ಎಲ್ಲಾ ಸೌಲಭ್ಯವು ಯಾವುದೇ ಒಂದು ವರ್ಗಕ್ಕೆ ಸೀಮಿತವಾಗದೇ ನಾಡಿನ ಸರ್ವಜನತೆಯ ಆಶೋತ್ತರಗಳಿಗೆ ಪೂರಕವಾಗಿ ರೂಪುಗೊಂಡಿದೆ. ಸಹಕಾರಿಯ ಆಡಳಿತ ಮಂಡಳಿಯ ಆಡಳಿತ ವೈಖರಿಯಲ್ಲಿ ಪರಣಿತಿ ಹೊಂದಿದ ತಂತ್ರಜ್ಞರು, ಆಭಿಯಂತರರು ಹಲವಾರು ವರ್ಷ ಅನುಭವ ಹೊಂದಿದ ಮುಖ್ಯಕಾರ್ಯನಿರ್ವಾಹಕರು, ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಸೇವೆ ಸಲ್ಲಿಸಿ ನಿವೃತ್ತ ಹೊಂದಿದ ಪ್ರಧಾನ ಕಛೇರಿ ಅಧಿಕಾರಿಗಳು, ಅನುಭವಿ ಡೆವಲಪ್‍ಮೆಂಟ್ ಆಫೀಸರ್, ರಾಷ್ಟ್ರೀಕೃತ ಹಾಗೂ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಲ್ಲಿ ಸೇವೆ ಸಲ್ಲಿಸಿ ನಿವೃತ್ತ ಹೊಂದಿದ ಆಂತರಿಕಲೆಕ್ಕಪರಿಶೋಧಕರು, ಉನ್ನತ ಹಣಕಾಸು ಸಲಹೆಗಾರರು, ಕಾನೂನು ಸಲಹೆಗಾರರು, ಹಿರಿಯರ ಮಾರ್ಗದರ್ಶನ ಸಲಹೆ-ಸೂಚನೆ ಮೇರೆಗೆ ತನ್ನ ಅಪ್ರತಿಮ ಗುರಿಯನ್ನು ಈಗಾಗಲೇ ತಲುಪಿದೆ. ಅಲ್ಲದೇ ಅಂತಾರಾಷ್ಟ್ರೀಯ ಅಧಿಕೃತ ರೇಟಿಂಗ್ ಏಜೆನ್ಸಿಗಳಲ್ಲೊಂದಾದ “ಕ್ರಿಸಿಲ್” (CRISIL) ಸಂಸ್ಥೆಯಿಂದ ಸಹಕಾರಿಯ ಠೇವಣಿ, ಸಾಲ ವಿತರಣೆ, ಗುಂತಾವಣೆ, ಸಾಲ ವಸೂಲಿ, ಸ್ವಂತ ಬಂಡವಾಳ, ಗಳಿಸಿದ ಲಾಭ ಮೊದಲಾವುಗಳನ್ನು ಪರಿಗಣಿಸಿ 2016-17ರಲ್ಲಿ “ಬಿ” (B-STABLE) ರೇಟಿಂಗ್ ನೀಡಿದ್ದು ಇದು ಸಹಕಾರಿಯ ಪಾರದರ್ಶಕ ವ್ಯವಹಾರಕ್ಕೆ ಕನ್ನಡಿ ಹಿಡಿದಂತಾಗಿದೆ. 2011ರಲ್ಲಿ 2011ರಲ್ಲಿ 500 ಶೇರು ಸದಸ್ಯರು ಹಾಗೂ ರೂಪಾಯಿ 5ಲಕ್ಷ ಶೇರು ಬಂಡವಾಳದೊಂದಿಗೆ ಆರಂಭವಾದ ಸಹಕಾರಿಯು ಮಾರ್ಚ 2024ರ ವರ್ಷಾಂತ್ಯಕ್ಕೆ 65,603 ಶೇರು ಸದಸ್ಯರನ್ನು ಹೊಂದಿದ್ದು ರೂ 5.47ಕೋಟಿ ಶೇರು ಬಂಡವಾಳ ಹೊಂದಿರುತ್ತದೆ. ಕಳೆದ ನಾಲ್ಕು ವರ್ಷಗಳಿಂದ ಲಾಭದಲ್ಲಿ ಮುನ್ನಡೆದಿದ್ದು ಶೇ10 ರವರೆಗೆ ಡಿವಿಡೆಂಡ್ ನೀಡಿದ್ದು ಇರುತ್ತದೆ. ಸಂಸ್ಥೆಯ ಪ್ರಗತಿಯ ಅಂಕಿ ಅಂಶ ಈ ರೀತಿ ಇರುತ್ತದೆ.

ಕ್ರಮ ಸಂ ವರ್ಷಾಂತ್ಯಕ್ಕೆ ಲಾಭಾಂಶ (ಕೋಟಿಗಳಲ್ಲಿ) ಡಿವಿಡೆಂಡ್ (%)
01. 2019-2020 1.19 7
02. 2020-2021 1.43 10
03. 2021-2022 1.14 10
04. 2022-2023 1.22 9

ಪ್ರಸ್ತುತ 2023-24ರಲ್ಲಿ ರೂ 2.47 ಕೋಟಿ ಯಷ್ಟು ನಿವ್ವಳ ಲಾಭಗಳಿಸಿದ್ದು ಇರುತ್ತದೆ. ಸಹಕಾರಿಯು ಸದಸ್ಯರೊಂದಿಗೆ ಠೇವಣಿ ಸಂಗ್ರಹಣೆ ಮತ್ತು ಸಾಲ ನೀಡುವ ಸೇವೆ ನೀಡುತ್ತ ಸ್ವ-ಸಹಾಯ/ಜಂಟಿಬಾಧ್ಯತಾ ಸಂಘಗಳಿಗೆ ವಿಶೇಷ ಸಾಲ ಸೌಲಭ್ಯ ಒದಗಿಸುತ್ತಿದ್ದು ಜಿಲ್ಲೆಯಲ್ಲಿಯೇ ಮುಂಚೂಣಿಯಲ್ಲಿದೆ. ಸಾಲ ವಸೂಲಿ ಕೂಡ ಸಮಾಧಾನಕರವಾಗಿರುತ್ತದೆ.

ಸಹಕಾರಿಯ ಎಲ್ಲಾ ಶಾಖೆಗಳಲ್ಲಿ ಆಡಳಿತ ಮಂಡಳಿ ನರ‍್ದೇಶಕರೊಬ್ಬರ ಮುಂದಾಳತ್ವದಲ್ಲಿ, ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಹಾಗೂ ಸಮಾಜ ಸೇವೆ ಸಲ್ಲಿಸುತ್ತಿರುವ ಸ್ಥಳೀಯ ನರ‍್ದೇಶಕರು ಒಳಗೊಂಡ ಶಾಖಾ ಅಭಿವೃದ್ಧಿ ಸಮಿತಿ (ಬಿಡಿಸಿ) ರಚಿಸಿದ್ದು ಅದು ಶಾಖೆಯ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಉತ್ತಮ ಸೇವಾ ಮನೋಭಾವವುಳ್ಳ ಸಿಬ್ಬಂದಿ, ಫೀಲ್ಡ್ ಎಕ್ಸಿಕ್ಯೂಟಿವ್ಸ್, ಕೋ-ರ‍್ಡಿನೇರ‍್ಸ್ ಇವರುಗಳ ಪ್ರಾಮಾಣಿಕ ಹಾಗೂ ತ್ವರಿತ ಸೇವೆಯಿಂದಾಗಿ ಜನಮಾನಸವಾಗಿದೆ.

ಹೀಗೆ ಸದಸ್ಯರುಗಳಿಗೆ ವಿವಿಧ ರೀತಿಯ ಸೌಲಭ್ಯಗಳನ್ನು ನೀಡುವದರೊಂದಿಗೆ ಆಸಕ್ತಿಯುಳ್ಳ ಸದಸ್ಯರಿಗೆ ಅಪಘಾತ ಹಾಗೂ ಮರಣೋತ್ತರ ಪರಿಹಾರ ಯೋಜನೆಯನ್ನೂ ನೀಡುತ್ತಿದ್ದು ಇದು ಸದಸ್ಯರ ರ‍್ಥಿಕತೆಗೆ ಭದ್ರತೆ ಒಳಪಡಿಸಿದ ಹೆಮ್ಮೆ ಸಹಕಾರಿಗೆ ಇದ್ದು ಸಕಾಲದಲ್ಲಿ ಎಲ್ಲಾ ಸದಸ್ಯರ ಸಲಹೆ ಸೂಚನೆ ಮೇರೆಗೆ ಮುನ್ನಡೆಯುತ್ತಿದ್ದು ಇದೀಗ ತನ್ನ ಕರ‍್ಯವ್ಯಾಪ್ತಿಯನ್ನು ರಾಜ್ಯಮಟ್ಟಕ್ಕೆ ವಿಸ್ತರಿಸಿಕೊಂಡಿದ್ದು ರಾಜ್ಯಾದ್ಯಂತ ಶಾಖೆ ತೆರೆಯುವದರೊಂದಿಗೆ ಸದಸ್ಯರುಗಳ ಮನೆಮನೆಗೆ ಸೇವೆ ಒದಗಿಸುವ ನಿಟ್ಟಿನಲ್ಲಿ ಸಾಗುತ್ತಿದ್ದು ಎಲ್ಲ ಸಹಕಾರವನ್ನು ಬಯಸುತ್ತದೆ.

ಸದಾ ಪಾರದರ್ಶಕ ಹಾಗೂ ತ್ವರಿತಸೇವೆಯೊಂದಿಗೆ ಅತ್ಯಲ್ಪ ಅವಧಿಯಲ್ಲಿ 17 ಶಾಖೆಗಳು

Contact Us